ಕುಂದಾಪುರ: ಕೊಂಕಣಿ ಖಾರ್ವಿ ಸಮಾಜದ ವಿರುದ್ಧ sಸತೀಶ್ ಖಾರ್ವಿ ,ಗಣೇಶ್ ಖಾರ್ವಿ , ಹಾಗೂ ಆನಂದ್ ಖಾರ್ವಿ ಇವರು ನಿರಂತರ ಅವಹೇಳನ ಮಾಡುತ್ತಾ ಬಂದಿದ್ದಾರೆ. ಅಮಾಯಕರ ಮೇಲೆ ಕೇಸು ದಾಖಲಿಸುವುದು, ಸಮಾಜದ ಕೆಲವು ವ್ಯಕ್ತಿಗಳು ಆರಾಧ್ಯಕ್ಷೇತ್ರ ಮಹಾಕಾಳಿ ದೇವಸ್ಥಾನ, ವಿದ್ಯಾರಂಗ ಮಿತ್ರ ಮಂಡಳಿ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ಸಮಾಜ ಬಹಳಷ್ಟು ನೊಂದು ಕೊಂಡಿದೆ. ಕಳೆದ 7 ವರ್ಷಗಳಿಂದ ಸಮಾಜದ ಜನರಿಗೆ ಇವರು ನೀಡುತ್ತಿರುವ ಕಿರುಕುಳದಿಂದ ಬೇಸತ್ತು ಹೋಗಿದ್ದೇವೆ. ಇತ್ತೀಚೆಗೆ ಸಮಾಜದ ಮುಗ್ಧರ ವಿರುದ್ಧ ಮಾನಭಂಗ ಯತ್ನ ಕೇಸು ದಾಖಲಿಸುವ ಮೂಲಕ ಸಮಾಜದ ಘನತೆ ಕುಗ್ಗಿಸುವಂತೆ ಮಾಡಿದ್ದಾರೆ. ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಇಲ್ಲ ವಾದಲ್ಲಿ ಅಖಿಲ ಭಾರತ ಕೊಂಕಣಿ ಖಾರ್ವಿ ಸಮಾಜದ ನೇತೃತ್ವದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಕೈಗೆತ್ತಿಕೊಳ್ಳಲಾಗುವುದು ಎಂದು ಖಾರ್ವಿಕೇರಿ ಮಹಾಕಾಳಿ ದೇವಳದ ಅಧ್ಯಕ್ಷ ಜಯಾನಂದ ಖಾರ್ವಿ ಹೇಳಿದರು. ಇಲ್ಲಿನ ತಾಲೂಕು ಕಚೇರಿ ಎದುರು ಕುಂದಾಪುರ ಕೊಂಕಣಿ ಖಾರ್ವಿ ಸಮಾಜದ ನೇತೃತ್ವದಲ್ಲಿ ಗುರುವಾರ ನಡೆದ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದರು. ಪುರಸಭೆ ನಾಮನಿರ್ದೇಶಿತ ಸದಸ್ಯ ಪ್ರಕಾಶ್ ಖಾರ್ವಿ ಮಾತನಾಡಿದರು. ಸಮಾಜದ ಪ್ರಮುಖರಾದ ಅರುಣ್ ಖಾರ್ವಿ, ಕೇಶವ ಖಾರ್ವಿ, ಶಂಕರ ನಾಯ್ಕ ಮಾತನಾಡಿದರು. ವಿದ್ಯಾರಂಗ ಅಧ್ಯಕ್ಷ ದಾಮೋದರ ಖಾರ್ವಿ, ವಿದ್ಯಾನಿಧಿ ಯೋ ಜನೆ ಅಧ್ಯಕ್ಷ ದಿನಕರ ಖಾರ್ವಿ, ಪುರಸಭೆ ಸದಸ್ಯರಾದ ಚಂದ್ರಶೇಖರ ಖಾರ್ವಿ, ರಾಘವೇಂದ್ರ ಖಾರ್ವಿ, ಖಾರ್ವಿ ಸಮಾಜದ ಸಹಸ್ರಾರು ಮಂದಿ ಪಾಲ್ಗೊಂಡಿದ್ದರು. ಮನವಿ ಸ್ವೀಕಾರ: ಸಹಾಯಕ ಕಮಿಷನರ್ ರಶ್ಮಿಎಸ್.ಆರ್. ಮನವಿ ಸ್ವೀಕರಿಸಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು. ಡಿವೈಎಸ್ಪಿ ಬೆಳ್ಳಿಯಪ್ಪ ಸರ್ಕಲ್ ಇನ್‌ಸ್ಪೆಕ್ಟರ್‌ಗಳಾದ ಜಯರಾಮ ಗೌಡ, ನಂದ್‌ಕುಮಾರ್ ಉಪಸ್ಥಿತರಿದ್ದರು. ಮೌನ ಮೆರವಣಿಗೆ: ಪ್ರತಿಭಟನೆಗೆ ಮೊದಲು ಸಹಸ್ರಾರು ಕೊಂಕಣಿ ಖಾರ್ವಿ ಸಮಾಜ ಬಾಂ ಧವರು ಮೌನ ಮೆರವಣಿಗೆ ಮೂಲಕ ತಹಸೀ ಲ್ದಾರರ ಕಚೇರಿಗೆ ಆಗಮಿಸಿದ್ದರು. ಜಿಲ್ಲಾಧಿ ಕಾರಿ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಬೇಕು. ನಾವು ಬಹಳಷ್ಟು ನೊಂದಿದ್ದೇವೆ. ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿದರು. ಎಸಿ ರಶ್ಮಿ ಎಸ್.ಆರ್. ಸಮಾಜ ಬಾಂಧವರಿಗೆ ಧೈರ್ಯ ತುಂಬಿ ವಿಷಯ ಡಿಸಿ ಅವರ ಗಮ ನಕ್ಕೆ ತಂದಿದ್ದು ಅವರ ಸೂಚನೆ ಯಂತೆ ಮನವಿ ಸ್ವೀಕರಿಸಿದ್ದೇನೆ. ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಆಶ್ವಾಸನೆ ನೀಡಿದರು.