ಉತ್ತರಪ್ರದೇಶದ ಪ್ರಯಾಗರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳವು ಇದೇ ಮಹಾಶಿವರಾತ್ರಿಯಂದು “ಪವಿತ್ರಸ್ನಾನ” ದೊಂದಿಗೆ ಸಮಾರೋಪಗೊಳ್ಳಲಿದೆ. ಇನ್ನು ಹದಿನೈದು ದಿನದಲ್ಲಿ ಸಮಾರೋಪಗೊಳ್ಳಲಿರುವ ಮಹಾಕುಂಭಮೇಳದಲ್ಲಿ ತುಳುನಾಡಿನ ಬಾವುಟ ರಾರಾಜಿಸಿರುವುದು ತುಳುನಾಡಿನ ಹೆಮ್ಮೆಯ ಸಂಗತಿ. ಉತ್ತರ ಪ್ರದೇಶದ ಪ್ರಯಾಗರಾಜಿನ ತ್ರಿವೇಣಿ ಸಂಗಮದಲ್ಲಿ ಕಾರ್ಕಳದಿಂದ ಪ್ರಯಾಗರಾಜಿಗೆ ತೆರಳಿದ ವಿಜಯ ಆಚಾರ್ಯ ಕಾಬೆಟ್ಟು, ಯಶವಂತ ಆಚಾರ್ಯ ಬಜಗೋಳಿ ಹಾಗೂ ಅಶ್ವಿನ್ ಶೆಟ್ಟಿ ಅಂಡಾರು ರವರು ತುಳು ಬಾವುಟ ನೆಟ್ಟು ತುಳುವಿನ ಮಹತ್ವ ಸಾರಿದ್ದಾರೆ. ಜಗತ್ತಿನಾದ್ಯಂತ ಕೋಟಿ ಕೋಟಿ ಜನರು ಭಾಗಿಯಾಗುವ ಕುಂಭಮೇಳದಲ್ಲಿ ತುಳುನಾಡಿನ ಬಾವುಟ ರಾರಾಜಿಸಿರುವುದು ನಿಜಕ್ಕೂ ತುಳುನಾಡಿನ (ತುಳುವರ) ಹೆಮ್ಮೆಯ ಸಂಗತಿಯಾಗಿದೆ. Post navigation ಮಣಿಪಾಲದಲ್ಲಿ ಚಾಲನೆ , ಇದು ಕಸ್ತೂರ್ಬಾ ಆಸ್ಪತ್ರೆಯ ಮಕ್ಕಳ ಚಿಕಿತ್ಸಾ ವಿಭಾಗದ ಉಪಕ್ರಮವಾಗಿದ್ದು ಮಣಿಪಾಲ ಫೌಂಡೇಶನ್ನಿಂದ ಬೆಂಬಲಿತವಾಗಿದೆ. ಜೆಇಇ ಮೈನ್ಸ್ 2025 (ಸೆಷನ್1)ನಲ್ಲಿ ಮಂಗಳೂರಿನ ನಾಲ್ಕು ವಿದ್ಯಾರ್ಥಿಗಳ ಸಾಧನೆ